Wednesday, 20 November 2013

“MODI”ಗಾರ

“MODI”ಗಾರ
ಎಲ್ಲಿ ನೋಡಿದರೂ ಭ್ರಷ್ಟಾಚಾರ
ಸರಿಯಿಲ್ಲ ಪ್ರಜೆಗಳ ಗ್ರಹಚಾರ
ಆಗುತ್ತಿದೆ ಈರುಳ್ಳಿ ಇನ್ನೂ ಖಾರ ಖಾರ
ಇದು “ಕೈ” ಸರ್ಕಾರದ ಹುನ್ನಾರ ||
ಪ್ರಜೆಗಳು ಕೂತಿದ್ದಾರೆ ಸಪ್ಪಗೆ
                             ಸರ್ಕಾರ ನಡೆಯುತ್ತಿದೆ ಬೆಚ್ಚಗೆ
                             ನಮಗೆ ಬೇಕು ಅಭಿವೃದ್ಧಿಯ ಅಪ್ಪುಗೆ
                             ಧಿಕ್ಕಾರವಿರಲಿ ಭ್ರಷ್ಟ “ಕೈ”ಗೆ ||
ದೇಶಕ್ಕಿಲ್ಲ ಭದ್ರ ಬುನಾದಿ
ಮಂತ್ರಿಗಳು ಹಿಡಿಯುತ್ತಿದ್ದಾರೆ ಮೋಸದ ಹಾದಿ
ಆದರೆ ಪ್ರಧಾನ ಮಂತ್ರಿ ರಾಹುಲ್ ಗಾಂಧಿ
ನಮಗಾರಿಗೂ ಇಲ್ಲ ಸಂಪೂರ್ಣ ನೆಮ್ಮದಿ ||
                          ಬನ್ನಿ ಸಾಕು ನಿಲ್ಲಿಸೋಣ ಈ ನಾಟಕ
                          ಮೋದಿಯೇ ನಮ್ಮ ಮುಂದಿನ ನಾಯಕ
                          ಅವರನ್ನು ಗೆಲ್ಲಿಸುವುದೇ ನಮ್ಮ ಕಾಯಕ
                          ಅವರು ಅಧಿಕಾರಕ್ಕೆ ಬಂದರೆ ಮಾತ್ರ ಸುಖ ||

ಅವರೇ ಅಭಿವೃದ್ಧಿಯ ನೇತಾರ
ದೇಶ ಮುನ್ನಡೆಸಬಲ್ಲ ಛಲಗಾರ
ನೀನೇ ನಮ್ಮ ಸಾಹುಕಾರ

ನಮೋ ನಮೋ modiಗಾರ ||

Saturday, 16 November 2013

THE 'VIRGIN'AL STORY E-2

THE ‘VIRGIN’AL STORY
                   Episode-2
            ENTRY WITH INCOGNITO






12 ಘಂಟೆ
ನಡುರಾತ್ರಿ
ಡಿಗ್ಲಾನ್  ದ್ವೀಪ
ಅರಬ್ಬೀ ಸಮುದ್ರ




ದಟ್ಟಾರಣ್ಯದಿಂದ ಸುತ್ತುವರೆದ ಹೊರಪ್ರಪಂಚದ ಮೀರಿದ ಡಿಗ್ಲಾನ್ ದ್ವೀಪ. ಎಂತಹ ವಜ್ರಗುಂಡಿಗೆಯವನಿಗೂ ಎದೆ ಝಲ್ಲೆನಿಸುವ ನಿಗೂಢ ಸ್ಥಳ. ಅವ್ಯವಹಾರಗಳಿಗೆ ಹೇಳಿ ಮಾಡಿಸಿದಂತಹ ಜಾಗ. ಅಂತಹ ಭಯಾನಕತೆ ಪುಷ್ಟಿ ನೀಡುವಂತೆ, ದೂರದಲ್ಲಿನ ಮಧ್ಯಗಾತ್ರದ INCOGNITO ಹೆಸರಿನ ಬೋಟೊಂದು ತನ್ನಬೆಳಕನ್ನು ಆಗಾಗ ಸೂಸುತ್ತಿತ್ತು.
“ಎಲ್ಲಾ ಮಾಲುಗಳು ಸರಿಯಾಗಿವೆಯೇ...? ಚೆಕ್ ಮಾಡು, ರಾಬರ್ಟ್.”
“ಕೋಕೇನ್ ನ ಎಲ್ಲಾ ಪಾಕೆಟ್ಟುಗಳು ಜನರನ್ನು ಸ್ವರ್ಗಕ್ಕೆರಿಸಲು ಕಾಯುತ್ತಿದೆ,ನಜೀರ್ ಭೈ” ಎಂದು ಮಾತನಾಡುತ್ತಿರುವಾಗ ಸಮುದ್ರದಲ್ಲಾದ ಚಲನವಲನ ಯಾರ ಗಮನಕ್ಕೂ ಬಾರದೇ ಹೋಯಿತು

 ಸಮುದ್ರದ ಕೊರೆಯುವ ತಣ್ಣನೆ ನೀರನ್ನು ಸೀಳಿಕೊಂಡು ಕಪ್ಪನೆಯ ಆಕ್ರತಿಯು ಪ್ರಶಾಂತ ಸಾಗರದಲ್ಲಿ ತೂಫಾನಿನಂತೆ ನುಗ್ಗಿಬಂತು.ಒಂದೇ ನೆಗೆತದಲ್ಲಿ deck ಮೇಲೆ ನಿಂತಿದ್ದ J.K ಬೋಟಿನಲ್ಲಿ ಪಹರೆಕಾಯುತ್ತಿದ್ದ guard ಗಳ ಗಮನಕ್ಕೆ ಬರುವ ಮುನ್ನವೇ ಅವರ ಪ್ರಾಣ ಪಕ್ಷಿ ಹಾರಿಹೋಗಿತ್ತು.
ಆ ಸದ್ದು ಕೆಳಿ ಇನ್ನೊಬ್ಬguard ಹೊರಬಂದ. ಕೂಡಲೇ ಕಾರ್ಯಪ್ರವರ್ತನಾದ J.K ಮಿಂಚಿನಂತೆ ಮುನ್ನುಗ್ಗಿ,ಆತನ ಕಿಬ್ಬೊಟ್ಟೆಗೆ ಬಲವಾಗಿ ಗುದ್ದಿದ. ಆ ಏಟಿನ ರಭಸಕ್ಕೆ guard ಚೀರುವ ಮುನ್ನವೇ,J.K ಆತನ ಕುತ್ತಿಗೆಯನ್ನು ಬಟ್ಟೆ ಹಿಂಡುವಂತೆ ಮುರಿದುಬಿಟ್ಟನು. ಆತನ ಚೀತ್ಕಾರ ಗಂಟಲಲ್ಲೆ ಉಳಿಯಿತು.
ಅದೇ ಸಮಯದಲ್ಲಿ engine room ಒಳಗೆ ತುಟಿಯಲ್ಲಿ ಸಿಗರೇಟ್ ಇಟ್ಟುಕೊಂಡು ಕೇಳಿದನು ನಜೀರ್
“ಏಯ್ ರಾಬರ್ಟ್ ... ಲೈಟರ್ ಎಲ್ಲಿ ..?”
“ತಗೊಳ್ಳಿ ಬಾಸ್ .”ಎಂದು ರಾಬರ್ಟ್ ಲೈಟರ್ ಹತ್ತಿಸಿದ .
ಎದುರಿಗೆ ಸಾಕ್ಷಾತ್ ಯಮನಂತೆ ರಿವಾಲ್ವಾರ್ ನ ನಳಿಕೆಯನ್ನು ರಾಬರ್ಟ್ ನ ಹಣೆಗೆ ಗುರಿಮಾಡಿ J.K ನಿಂತಿದ್ದ . ಪಕ್ಕದಲ್ಲೇ ಶಿರರಹಿತವಾಗಿ ರಕ್ತದ ಮಡುವಿನಲ್ಲಿ  ಬಿದ್ದಿದ್ದ ನಜೀರ್ ನ ಹೆಣವನ್ನು ನೋಡಿ ರಾಬರ್ಟ್ ದಂಗಾದನು
“ಆಹ್ಹ್ ...!!ಯಾ...ಯಾ...ಯಾರು ನೀನು ??”
“ನಾಮ್ ತೊ ಸುನಾ ಹೊಗಾ
ಲೇಕಿನ್ ದೇಖಾ ನಹಿ ಹೊಗಾ
ಅಬ್ ತು ನಹಿ ಬಛ್ಪಾಯೇಗಾ”
“ಪ್ಲೀಜ್ ಬೇಡ . ಕೊಲ್ಲಬೇ ...... “ಎಂದು ರಾಬರ್ಟ್ ಹೇಳುವ ಮುನ್ನವೇ ಬುಲ್ಲೆಟ್ ಆತನ ತಲೆಯನ್ನು ಸೀಳಿತು .
“ನಾಮ್ ಜೈಸ  ಕಾಮ್ ಮೇರಾ
ಕಾಮ್ ಸೆ ಹಿ ನಾಮ್ ಮೇರಾ
ಅಭ್ ಕತಮ್ ಹೋಗಿ ಕಹಾನಿ ತೇರಾ
ಶುರು ಹೋಗಾ ಸಫರ್ ಮೇರಾ .....”
“ನಾಮ್ ಹೇ JUST KILL…..”  
   

                 *         *           *            *

Thursday, 14 November 2013

ಜಾರಿ ಹೋದ GLORY

ಮಿತ್ರರೇ , ಭಾರತದ ಸದ್ಯದ ಪರಿಸ್ಥಿತಿಯ ಬಗ್ಗೆ ನಮ್ಮಿಂದ ಒಂದು ಅಣಕು  ಕವನ




ಜಾರಿ ಹೋದ GLORY


ಮಲಗಬೇಡವೋ ಮಂತ್ರಿ, ನೀ ಕುತಂತ್ರಿ
ಭಾರತವೊಂದು ದೊಡ್ಡ ಕಂಟ್ರಿ
ನ್ಯಾಯದ ಹಾದಿಯಿಂದ  ಜಾರಿ
ದೇಶದ ಸಂಪತ್ತನ್ನು ಮಾರಿ, ಕಟ್ಟುವಿರಿ ನಮ್ಮ ಗೋರಿ

ಆಗ ಇದ್ದರು ಪಂಪ ರನ್ನ
ದಾರಿ ಬದಿಯಲಿ ಮಾರುತ್ತಿದ್ದರು ಚಿನ್ನ
ಈಗ ವೋಟಿಗಾಗಿ ಮಾಡುವರು ಸಾಲ ಮನ್ನ
ಬಡವರ ಗೋಳು ಇವರಿಗೆ ಚೆನ್ನ

ಕೊಡುವರು ಶಾಲೆಯಲ್ಲಿ ಹಳಸಿದ ಊಟ
ತಿಂದವರು ಗೋತ
ಮಂತ್ರಿಗಳಿಗೆ ಇದು ಆಟ
ಹೇಳಿ ಈ ಅವ್ಯವಸ್ಥೆಗೆ ಟಾಟ

ಬೆಲೆಯಿಲ್ಲ ರೂಪಾಯಿಗೆ
ಉದ್ಯೋಗವಿಲ್ಲ ಜನರಿಗೆ
ಕಟ್ಟುವರು ಮಂತ್ರಿಗಳು ಮನೆ ಮಾಳಿಗೆ
ಇದೆಂತಾ ಬೆಳವಣಿಗೆ

ದೇಶದಲ್ಲಿ ಅತ್ತ್ಯಾಚಾರ, ಮಂತ್ರಿಗಳ ಭ್ರಷ್ಟಾಚಾರ
ಇದು ನಮ್ಮ ಗ್ರಹಚಾರ
ಎಲ್ಲಿದೆ ಭಾರತದ ಸದಾಚಾರ
ಮಾಡೋಣ ನಾವು ವಿಚಾರ         
*    *    *    *

Tuesday, 12 November 2013

THE ‘VIRGIN’AL STORY

THE ‘VIRGIN’AL STORY
                       episode-1
inizia la storia

ಬೆಳಗ್ಗಿನ ಆರರ ಜಾವ. ಆಗತಾನೆ ಪ್ರಕೃತಿಯು ಮಂಜಿನ ಚಾದರ ತೆಗೆಯಲಾರಂಭಿಸಿದ್ದಳು. ಪಕ್ಷಿಗಳು ಉದಯರಾಗವನ್ನು ಹಾಡುತ್ತಿದ್ದವು. ಜಿಟಿ ಜಿಟಿ ನಾದಕ್ಕೆ ಹಿಮ್ಮೇಳದಂತಿತ್ತು ಜೀರುಂಡೆಗಳ ಸದ್ದು.ಶಿರಾಡಿಯ ಅಂಕುಡೊಂಕಿನ ರಸ್ತೆಗಳಲ್ಲಿ ಕವಿದಿದ್ದ ಮಂಜನ್ನು ಸೀಳಿಕೊಂಡು i-10 ಕಾರೊಂದು ಸಾಗಿ ಬರುತ್ತಿತ್ತು.
 "ಏನು ಯೋಚಿಸುತ್ತಿದ್ದೀಯಾ? ಹೇಳು ಡಿಯರ್?" ಜಯಾ ಕೇಳಿದಳು.
"ಈ ವೀಕೆಂಡ್ ಅನ್ನು ಮಕ್ಕಳ ಜೊತೆ ಮಜವಾಗಿ ಕಳೆದದ್ದಾಯಿತು. ನಾಳೆಯಿಂದ ಅದೇ  routine..ಬಾಸ್ ನ ಬೈಗುಳ ..ಛೆ!!" ಎಂದು ಹೇಳಿ ಅಶೋಕ್ ಸುಮ್ಮನಾದ. 
"ಡ್ಯಾಡಿ , ಸೂಸು ಬರ್ತಿದೆ, ಅರ್ಜೆಂಟು. ಕಾರು ನಿಲ್ಸು.." ಸುಮಂತ್  ಕೂಗಿದ. 
"ಸ್ವಲ್ಪ ತಾಳು. ಕಾರ್ ಸೀಟನ್ನು ಒದ್ದೆ ಮಾಡ್ಬೇಡ.." ಎಂದು ಹೇಳಿದಾಗ ಎಲ್ಲರೂ ನಕ್ಕರು. ಸುಮಂತ್ ಕಾರಿನಿಂದ ಇಳಿದವನೇ ಅವಸರದಿಂದ  
 zip ತೆಗೆದು ಮೋರಿಯ ಕಡೆಗೆ ಓಡಿದ. 
"ಡಿಯರ್ ಬೆಂಗಳೂರಿಗೆ ಇನ್ನೂ ಎಷ್ಟು ತಾಸಿನ journey?" ಎಂದು ಜಯಾ ಕೇಳುತ್ತಿರುವಾಗಲೇ ಸುಮಂತ್ ಕಿಟಾರನೆ ಕಿರುಚಿದ್ದು ಕೇಳಿ ಬಂತು.
                              *      *      *       *

ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ಸುರೇಶ್ ಗೆ ಪೇದೆ ಸೆಲ್ಯೂಟ್ ಹೊಡೆದು ಘಟನೆ ವಿವರಿಸಲಾರಂಭಿಸಿದ. "ಸಾರ್, ಸತ್ತಿರುವ ವ್ಯಕ್ತಿ ಅಂದಾಜು 30-35 ವರ್ಷದವನು. ಮುಖ ಪೂರ್ತಿ ಜಜ್ಜಿ ಹೋಗಿದೆ. ಮೈಯೆಲ್ಲಾ ರಕ್ತ. post mortemಗೆ ಕಳ್ಸೋ ಮೊದ್ಲು ನೀವೊಂದು ಬಾರಿ ಚೆಕ್ ಮಾಡ್ಬಿಡಿ."
ಸುರೇಶ್ ಶವವನ್ನು ಪರೀಕ್ಷಿಸಿದ. 
"ನಕ್ಸಲೈಟ್ ಕೆಲಸ ಅಂತ ಕೇಸ್ ಮುಚ್ಚಿ ಹಾಕೋಣ."
"ಸ್ವಲ್ಪ __ ಮುಚ್ಚು ರಮೇಶ್, ಅದಕ್ಕೆ ನೀನಿನ್ನೂ ಪೇದೆ ಆಗೇ ಇದೀಯಾ. ನಾನು SI ಅಗಿದ್ದೀನಿ" ಎಂದು ತನ್ನ ಅವಳಿ ಸಹೋದರನಿಗೆ ಹೇಳಿದ. 
"ಇಲ್ನೋಡು, ಇದು ಯಾವುದೇ ಮಾಮೂಲಿ ಕೇಸಲ್ಲ. ಮುಷ್ಠಿಯಲ್ಲಿ ಲಾಕೆಟ್ ಇದೆ. ಬಾಯಲ್ಲಿ ಬುಲೆಟ್ ಬೇರೆ ಇದೆ. ನಕ್ಸಲೈಟ್ ನನ್ ಮಕ್ಳು ಮಾಡಿದ್ದಂತೂ ಅಲ್ಲ. ನನ್ನ ಮೂರು ತಿಂಗಳ 
experience ಮೇಲಾಣೆ. ಆ ಕಾನ್ಸ್ಟೇಬಲ್ ಗಳಿಗೆ evidence ಎಲ್ಲಾ collect ಮಾಡಿ, bodyನ ಕಳ್ಸೋಕೆ ಹೇಳು."
                              *      *      *       *

SP OFFICE
ಹಾಸನ.
"ಅದು ಹೇಗ್ರೀ ಸಾಧ್ಯ?" 
"ಇಷ್ಟು police protection ನಡುವೇನು ambulance ಮೇಲೆ attack ಆಗುತ್ತೆ ಅಂದ್ರೆ, ನಿಮ್ಮ ಬೇಜವಾಬ್ದಾರಿ ಇದರಲ್ಲೇ ಕಾಣುತ್ತೆ. ನೀವೆಲ್ಲಾ ಹೇಗ್ರಿ  SI ಅದ್ರಿ?"
"ನಮ್ಮ ಅಮ್ಮಾನೂ ಅದೇ ಕೇಳ್ತಿರ್ತಾರೆ ಸಾರ್.." ಎಂದ ಸುರೇಶ್.
"Shut up" ಎಂದು ಹೇಳಿ ಫೋನ್ ರಿಸೀವರ್ ಎತ್ತಿದ.
"ಹಲೋ ಸರ್ ನಾನು SP ಬಸವರಾಜು ಹಾಸನದಿಂದ. ಸಾರ್.. ಅದು.. ಶಿರಾಡಿ ಘಾಟಿ ಕೇಸು.."
"_ _ _"
"ಹೌದಾ ಸಾರ್..!! ಇಂಡಿಯದಲ್ಲೇ ಇದಾರಾ?"
"_ _ _"
"ನಾಳೇನೇ ಬರ್ತಾರಾ..? OK ಸಾರ್ ಎಲ್ಲಾ ವ್ಯವಸ್ಥೆ ಮಾಡ್ತೀನಿ. ಥ್ಯಾಂಕ್ಯೂ ಸರ್" ಎಂದು ಫೋನಿಟ್ಟ.
ಆಗ ಸುರೇಶ್ ಕೇಳಿದ -"ಏನು ಸಾರ್, next plan ಏನು..?"
"ನಿಮ್ಮ ಹತ್ರ ಆಗೋ ಕೆಲ್ಸ ಅಲ್ಲಾರೀ ಇದು. ಕಮಿಷನರ್ ಸಾಹೇಬ್ರು ಇದಕ್ಕೇ ಅಂತಾನೆ
special agentನ ಕಳ್ಸಕ್ಕೆ ಒಪ್ಪಿದ್ದಾರೆ.." 
"ಯಾರು ಸಾರ್ ಅದು??" ಕುತೂಹಲದಿಂದ ಕೇಳಿದ.

"JK"

ಆರಂಭ

ಮಿತ್ರರೇ, ನಮ್ಮ ಪ್ರಥಮ ಬರಹ THE VIRGINAL STORY. ಇದೊಂದು ರೋಮಾಂಚನಕಾರಿ ಧಾರಾವಾಹಿ. ಕಂತುಗಳಲ್ಲಿ ಇದನ್ನು ಪ್ರತಿ ವಾರ ಪ್ರಸ್ತುತ ಪಡಿಸಲಿದ್ದೇವೆ. ದಯವಿಟ್ಟು ಓದಿ , ನಿಮ್ಮ ಸಹಕಾರ, ಸಲಹೆಗಳನ್ನು ಕೊಡಲು ಮರೆಯದಿರಿ.