THE ‘VIRGIN’AL STORY
episode-1
inizia la storia
ಬೆಳಗ್ಗಿನ ಆರರ ಜಾವ. ಆಗತಾನೆ ಪ್ರಕೃತಿಯು ಮಂಜಿನ ಚಾದರ ತೆಗೆಯಲಾರಂಭಿಸಿದ್ದಳು. ಪಕ್ಷಿಗಳು ಉದಯರಾಗವನ್ನು ಹಾಡುತ್ತಿದ್ದವು. ಜಿಟಿ ಜಿಟಿ ನಾದಕ್ಕೆ ಹಿಮ್ಮೇಳದಂತಿತ್ತು ಜೀರುಂಡೆಗಳ ಸದ್ದು.ಶಿರಾಡಿಯ ಅಂಕುಡೊಂಕಿನ ರಸ್ತೆಗಳಲ್ಲಿ ಕವಿದಿದ್ದ ಮಂಜನ್ನು ಸೀಳಿಕೊಂಡು i-10 ಕಾರೊಂದು ಸಾಗಿ ಬರುತ್ತಿತ್ತು.
"ಏನು ಯೋಚಿಸುತ್ತಿದ್ದೀಯಾ? ಹೇಳು ಡಿಯರ್?" ಜಯಾ ಕೇಳಿದಳು.
"ಈ ವೀಕೆಂಡ್ ಅನ್ನು ಮಕ್ಕಳ ಜೊತೆ ಮಜವಾಗಿ ಕಳೆದದ್ದಾಯಿತು. ನಾಳೆಯಿಂದ ಅದೇ routine..ಬಾಸ್ ನ ಬೈಗುಳ ..ಛೆ!!" ಎಂದು ಹೇಳಿ ಅಶೋಕ್ ಸುಮ್ಮನಾದ.
"ಡ್ಯಾಡಿ , ಸೂಸು ಬರ್ತಿದೆ, ಅರ್ಜೆಂಟು. ಕಾರು ನಿಲ್ಸು.." ಸುಮಂತ್ ಕೂಗಿದ.
"ಸ್ವಲ್ಪ ತಾಳು. ಕಾರ್ ಸೀಟನ್ನು ಒದ್ದೆ ಮಾಡ್ಬೇಡ.." ಎಂದು ಹೇಳಿದಾಗ ಎಲ್ಲರೂ ನಕ್ಕರು. ಸುಮಂತ್ ಕಾರಿನಿಂದ ಇಳಿದವನೇ ಅವಸರದಿಂದ
zip ತೆಗೆದು ಮೋರಿಯ ಕಡೆಗೆ ಓಡಿದ.
"ಡಿಯರ್ ಬೆಂಗಳೂರಿಗೆ ಇನ್ನೂ ಎಷ್ಟು ತಾಸಿನ journey?" ಎಂದು ಜಯಾ ಕೇಳುತ್ತಿರುವಾಗಲೇ ಸುಮಂತ್ ಕಿಟಾರನೆ ಕಿರುಚಿದ್ದು ಕೇಳಿ ಬಂತು.
* * * *
ಸ್ಥಳಕ್ಕೆ ಆಗಮಿಸಿದ ಸಬ್ ಇನ್ಸ್ಪೆಕ್ಟರ್ ಸುರೇಶ್ ಗೆ ಪೇದೆ ಸೆಲ್ಯೂಟ್ ಹೊಡೆದು ಘಟನೆ ವಿವರಿಸಲಾರಂಭಿಸಿದ. "ಸಾರ್, ಸತ್ತಿರುವ ವ್ಯಕ್ತಿ ಅಂದಾಜು 30-35 ವರ್ಷದವನು. ಮುಖ ಪೂರ್ತಿ ಜಜ್ಜಿ ಹೋಗಿದೆ. ಮೈಯೆಲ್ಲಾ ರಕ್ತ. post mortemಗೆ ಕಳ್ಸೋ ಮೊದ್ಲು ನೀವೊಂದು ಬಾರಿ ಚೆಕ್ ಮಾಡ್ಬಿಡಿ."
ಸುರೇಶ್ ಶವವನ್ನು ಪರೀಕ್ಷಿಸಿದ.
"ನಕ್ಸಲೈಟ್ ಕೆಲಸ ಅಂತ ಕೇಸ್ ಮುಚ್ಚಿ ಹಾಕೋಣ."
"ಸ್ವಲ್ಪ __ ಮುಚ್ಚು ರಮೇಶ್, ಅದಕ್ಕೆ ನೀನಿನ್ನೂ ಪೇದೆ ಆಗೇ ಇದೀಯಾ. ನಾನು SI ಅಗಿದ್ದೀನಿ" ಎಂದು ತನ್ನ ಅವಳಿ ಸಹೋದರನಿಗೆ ಹೇಳಿದ.
"ಇಲ್ನೋಡು, ಇದು ಯಾವುದೇ ಮಾಮೂಲಿ ಕೇಸಲ್ಲ. ಮುಷ್ಠಿಯಲ್ಲಿ ಲಾಕೆಟ್ ಇದೆ. ಬಾಯಲ್ಲಿ ಬುಲೆಟ್ ಬೇರೆ ಇದೆ. ನಕ್ಸಲೈಟ್ ನನ್ ಮಕ್ಳು ಮಾಡಿದ್ದಂತೂ ಅಲ್ಲ. ನನ್ನ ಮೂರು ತಿಂಗಳ
experience ಮೇಲಾಣೆ. ಆ ಕಾನ್ಸ್ಟೇಬಲ್ ಗಳಿಗೆ evidence ಎಲ್ಲಾ collect ಮಾಡಿ, bodyನ ಕಳ್ಸೋಕೆ ಹೇಳು."
* * * *
SP OFFICE
ಹಾಸನ.
"ಅದು ಹೇಗ್ರೀ ಸಾಧ್ಯ?"
"ಇಷ್ಟು police protection ನಡುವೇನು ambulance ಮೇಲೆ attack ಆಗುತ್ತೆ ಅಂದ್ರೆ, ನಿಮ್ಮ ಬೇಜವಾಬ್ದಾರಿ ಇದರಲ್ಲೇ ಕಾಣುತ್ತೆ. ನೀವೆಲ್ಲಾ ಹೇಗ್ರಿ SI ಅದ್ರಿ?"
"ನಮ್ಮ ಅಮ್ಮಾನೂ ಅದೇ ಕೇಳ್ತಿರ್ತಾರೆ ಸಾರ್.." ಎಂದ ಸುರೇಶ್.
"Shut up" ಎಂದು ಹೇಳಿ ಫೋನ್ ರಿಸೀವರ್ ಎತ್ತಿದ.
"ಹಲೋ ಸರ್ ನಾನು SP ಬಸವರಾಜು ಹಾಸನದಿಂದ. ಸಾರ್.. ಅದು.. ಶಿರಾಡಿ ಘಾಟಿ ಕೇಸು.."
"_ _ _"
"ಹೌದಾ ಸಾರ್..!! ಇಂಡಿಯದಲ್ಲೇ ಇದಾರಾ?"
"_ _ _"
"ನಾಳೇನೇ ಬರ್ತಾರಾ..? OK ಸಾರ್ ಎಲ್ಲಾ ವ್ಯವಸ್ಥೆ ಮಾಡ್ತೀನಿ. ಥ್ಯಾಂಕ್ಯೂ ಸರ್" ಎಂದು ಫೋನಿಟ್ಟ.
ಆಗ ಸುರೇಶ್ ಕೇಳಿದ -"ಏನು ಸಾರ್, next plan ಏನು..?"
"ನಿಮ್ಮ ಹತ್ರ ಆಗೋ ಕೆಲ್ಸ ಅಲ್ಲಾರೀ ಇದು. ಕಮಿಷನರ್ ಸಾಹೇಬ್ರು ಇದಕ್ಕೇ ಅಂತಾನೆ
special agentನ ಕಳ್ಸಕ್ಕೆ ಒಪ್ಪಿದ್ದಾರೆ.."
"ಯಾರು ಸಾರ್ ಅದು??" ಕುತೂಹಲದಿಂದ ಕೇಳಿದ.
"JK"